2025-26: 70ನೇ ಕನ್ನಡ ರಾಜ್ಯೋತ್ಸವದ ಭವ್ಯ ಸಂಭ್ರಮ 

🌼💛❤️ 70ನೇ ಕನ್ನಡ ರಾಜ್ಯೋತ್ಸವದ ಭವ್ಯ ಸಂಭ್ರಮ ❤️💛🌼

ವಿದ್ಯಾ ಸೌಧ ಕಿಡ್ಸ್‌ ಶಾಲೆಯಲ್ಲಿ
70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಧ್ವಜಾರೋಹಣವನ್ನು ವಿದ್ಯಾ ಸೌಧ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಪವನ ಮಂಜೇಗೌಡರು ನೆರವೇರಿಸಿದರು.

ಖ್ಯಾತ ಕಾದಂಬರಿಕಾರ್ತಿ ಶ್ರೀಮತಿ ಶೈಲಜಾ ಎನ್ (ಹಾಸನ್) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ತಮ್ಮ ಪ್ರೇರಣಾದಾಯಕ ಮಾತುಗಳಿಂದ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನವನ್ನು ಬೆಳೆಸಿದರು.

ವಿದ್ಯಾರ್ಥಿಗಳು ನೀಡಿದ ಸಮೂಹಗೀತೆಗಳು, ನೃತ್ಯ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಗೆದ್ದವು.

ಪುಟಾಣಿ ಸ್ಕಂದ ಕನ್ನಡದ ಮಹತ್ವದ ಕುರಿತು ತಮ್ಮ ಮಧುರ ನುಡಿಯಿಂದ ಎಲ್ಲರ ಮೆಚ್ಚುಗೆ ಪಡೆದರು.

ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕರ್ನಾಟಕ ಧ್ವಜಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು, ಕನ್ನಡ ನಾಡಿನ ಗೌರವವನ್ನು ಕೊಂಡಾಡಿದರು.

💛❤️ ಹಸಿರಾಗಲಿ ಕನ್ನಡ, ಉಸಿರಾಗಲಿ ಕನ್ನಡ! ಜೈ ಭುವನೇಶ್ವರಿ! ❤️💛

Admission Enquiry

Thank you!

Download the 2025-26 E-Prospectus