“ಎದೆ ತಟ್ಟಿ ಹೇಳು ನಾ ಭಾರತೀಯನೆಂದು,
ಗರ್ವದಿಂದ ಬಾಳು ನಾ ಕನ್ನಡಿಗನೆಂದು,
ಸಾವಿರ ಭಾಷೆ ನಾಲಿಗೆಯಲ್ಲಿರಲಿ
ಕನ್ನಡ ಭಾಷೆ ಹೃದಯದಲ್ಲಿರಲಿ……”
ನವೆಂಬರ್ 4 ರಂದು ನಮ್ಮ ಶಾಲೆಯಲ್ಲಿ ಅಜ್ಜಿ ತಾತಂದಿರ ದಿನ ಮತ್ತು ಕರ್ನಾಟಕ ರಾಜ್ಯೋತ್ಸವ 2023 ರ ಅದ್ಧೂರಿ ಆಚರಣೆಯನ್ನು ಮಾಡಿದೆವು. ವಿದ್ಯಾ ಸೌಧ ಪದವಿ ಕಾಲೇಜಿನ ಪ್ರಾಂಶುಪಾಲರು ಶ್ರೀಯುತ ರಂಗೇಗೌಡರು ಮುಖ್ಯ ಅತಿಥಿಗಳಾಗಿದ್ದರು. ನಮ್ಮ ಪುಟಾಣಿ ಮಕ್ಕಳು ತಮ್ಮ ನೃತ್ಯ,ಹಾಡು, ಹಾಗೂ ಕಿರು ಪ್ರಹಸನ ದ ಮೂಲಕ ನೆರೆದಿದ್ದ ಎಲ್ಲರ ಮನರಂಜಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಮಮತಾ ಮೇಡಂ ರವರು ಹಿರಿಯರನ್ನು ಉದ್ದೇಶಿಸಿ ಹಿತನುಡಿಗಳನ್ನು ಆಡಿ,ಮನೆಗೆ ಹಿರಿಯರ ಅವಶ್ಯಕತೆ ಹಾಗೂ ಬಾಲ್ಯದಲ್ಲಿ ಅವರ ಇರುವಿಕೆಯ ಮಹತ್ವವನ್ನು ವಿವರಿಸಿದರು.ಕೆಲವು ಸರಳ ಆಟಗಳನ್ನಾಡಿ ,ಬಹುಮಾನಗಳನ್ನು ಗಳಿಸಿ ಹಿರಿಜೀವಗಳು ಸಂತಸಗೊಂಡವು.ಅಪರಾಹ್ನ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.