ವಿದ್ಯಾ ಸೌಧ ಪಬ್ಲಿಕ್ ಶಾಲೆ ಕೆ. ಐ. ಎ. ಡಿ. ಬಿ ಹಾಸನ ಇಲ್ಲಿ , ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯನ್ನು ಬಹಳ
ಅರ್ಥಪೂರ್ಣವಾಗಿ ಆಚರಿಸಲಾಯಿತು. ಆನ್ ಲೈನ್ ಮೂಲಕವೇ ಮಕ್ಕಳು ಕನ್ನಡ ರಾಜ್ಯೋತ್ಸವದ ಮಹತ್ವದ
ಬಗ್ಗೆ ತಿಳಿಸಿದರು ಮತ್ತು ಕನ್ನಡ ಹಾಡನ್ನು ಹಾಡಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಮಮತಾ ನಟೇಶ್ ರವರು ಭುವನೇಶ್ವರಿ ದೇವಿಗೆ ದೀಪಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಿ
ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಭಾಗವಹಿಸಿದ್ದರು.