2026 – 27 ೭೧ ನೇ ವಿದ್ಯಾ ಸೌಧ ಶಾಲೆಯಲ್ಲಿ ಕನ್ನಡ ಕಲರವ – ವಿದ್ಯಾ ಸೌಧ ಪಬ್ಲಿಕ್ ಸ್ಕೂಲ್ ,ಪೀಣ್ಯ ಬೆಂಗಳೂರು

ಬೆಂಗಳೂರು ನವೆಂಬರ್ 1 : ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ೭೧ ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರು ಹಾಗೂ ಸುದ್ದಿ ವಾಚಕರಾದ ಶ್ರೀಯುತ ಮಂಜುನಾಥ ಸಿ ನೆಟ್ಕಲ್ ರವರು ಆಗಮಿಸಿದ್ದರು. ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು. ನಂತರ ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಕನ್ನಡ ಭಾಷೆಯ ಮಹತ್ವದ ಕುರಿತು ಮಾತನಾಡಿದರು. ವಿದ್ಯಾ ಸೌಧ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಶ್ರೀಯುತ ಮಂಜೇಗೌಡ ರವರು ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಮಾತನಾಡಲು ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು. ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡಿನ ಹಿರಿಮೆ ಸಾರುವ ಭಾಷಣ ಜನಪದ ನೃತ್ಯ, ಗಾಯನ, ಛದ್ಮವೇಷ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಕನ್ನಡ ನಾಡಿನ ಇತಿಹಾಸ, ಕನ್ನಡ ಸಾಹಿತ್ಯ ಮತ್ತು ಕನ್ನಡದ ಮಹಾನ್ ಕವಿಗಳ ಕೊಡುಗೆಗಳನ್ನು ಸ್ಮರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾ ಸೌಧ ಪಬ್ಲಿಕ್ ಶಾಲೆಯ ಸಹ ಸಂಸ್ಥಾಪಕರಾದ ಶ್ರೀ ಅರವಿಂದ್ ಮಂಜೇಗೌಡ ರವರು ಆಡಳಿತ ವಿಭಾಗದ ಕಾರ್ಯನಿರ್ವಾಹಕರಾದ ಶ್ರೀ ಮೋಹನ್ ರವರು ಪ್ರಾಂಶುಪಾಲರಾದ ಶ್ರೀಮತಿ ಪದ್ಮಶ್ರೀ ಅವರು ಉಪ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಅವರು ಶಿಕ್ಷಕರು ಶಿಕ್ಷಕೇತರ ವರ್ಗದವರು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Recent Events

2026 – 27 Vidyamanthan Guruvandana – Vidya Soudha Public School, Peenya Bangalore

2026-27 India Top School Award 2026 – Vidya Soudha Public School,Peenya Bangalore

2026 – 27 “Dr. A.P.J. Abdul Kalam Ignited Mind – Principals’ Award”

New Campus NEW CAMPUS Opening Soon
New Campus NEW CAMPUS Opening Soon Explore Now
Vidya soudha group of institutions logo

We're Coming to North West Bangalore

New Campus Admissions Open Now

CBSE School in North west

Pu College In north west

Admission Enquiry

Thank you!

Vidya soudha group of institutions e-prospectus download

Download the 2026-27 E-Prospectus