2024-25: Kannada Rajyotsava Celebration

ಚಿಗುರಿದ ಕನಸಲಿ ಒಲುಮೆಯ ಕನ್ನಡ

ನಮ್ಮ ವಿದ್ಯಸೌಧ ಪಬ್ಲಿಕ್ ಶಾಲೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಐದರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ನಡಾಂಬೆಯನ್ನು ಸ್ಮರಿಸುತ್ತ ಕನ್ನಡದ ಜ್ಯೋತಿ ಬೆಳಗುತ್ತಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು.. ಹಚ್ಚೇವು ಕನ್ನಡದ ದೀಪ ನೃತ್ಯ ಮಾಡುತ್ತಾ ಮಕ್ಕಳು ಕನ್ನಡ ತಾಯಿಯನ್ನು ಗೌರವಿಸಿದರು. ಸ್ವಾಗತ ಭಾಷಣದ ಮೂಲಕ ಈ ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದರು. ಕರ್ನಾಟಕ ಏಕೀಕರಣ, ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿದರು. ನಮ್ಮ ಭಾಷೆ, ನಮ್ಮ ಇತಿಹಾಸ, ನಮ್ಮ ವಾಸ್ತುಶಿಲ್ಪಗಳ ಕುರಿತು ನಮ್ಮ ವಿದ್ಯಾರ್ಥಿಗಳು ಹಾಡನ್ನು ಹಾಡುವ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಸಾರಿದರು. ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪದ್ಮಶ್ರೀರವರು ಕನ್ನಡ ನಾಡು ನುಡಿಯ ಬಗ್ಗೆ ಹಿತವಚನವನ್ನು ಹೇಳಿದರು. ಕನ್ನಡದ ಹಾಡನ್ನು ಹಾಡುವ ಮೂಲಕ ತಮ್ಮ ಕನ್ನಡ ಅಭಿಮಾನವನ್ನು ತೋರಿದರು. ವಂದನಾರ್ಪಣೆಯೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು.

Recent Events

2025-26: ALOHA Abacus Global Champions from VSPS!

2025-26: Quiz Competition

2025-26: Investiture Ceremony

Admission Enquiry

Thank you!

Download the 2025-26 E-Prospectus