೭೧ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ- ೨೦೨೬
ವಿದ್ಯಾಸೌಧ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ ವತಿಯಿಂದ ದಿನಾಂಕ ೩-೧೧-೨೦೨೬ರ ಮಧ್ಯಾಹ್ನ ೨ ಗಂಟೆಗೆ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಆರ್. ವಸಂತ್ ಕುಮಾರ್, ಅಧ್ಯಕ್ಷರಾಗಿ ಶ್ರೀ ಅರವಿಂದ್ ಮಂಜೇಗೌಡ ಹಾಗೂ ಪ್ರಸ್ತಾವಿಕ ನುಡಿಯನ್ನು ಡಾ. ಧನಂಜಯ ಬಿ.ಆರ್. ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಮಹತ್ವ, ಕರ್ನಾಟಕದ ಇತಿಹಾಸ, ನಾಡು-ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಮಾತನಾಡಲಾಯಿತು.
ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನ ಮತ್ತು ನಾಡಿನ ಬಗ್ಗೆ ಗೌರವ ಮೂಡಿಸುವ ಸಂದೇಶವನ್ನು ನೀಡಲಾಯಿತು. ಆ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮವು ಅಮೋಘವಾಗಿ ಮೂಡಿ ಬಂತು. ಒಟ್ಟಾರೆಯಾಗಿ, ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ಕನ್ನಡದ ಕಂಪನ್ನು ಪಸರಿಸುವ ಮೂಲಕ ಎಲ್ಲರಲ್ಲಿಯೂ ನಾಡು-ನುಡಿಯ ಅಭಿಮಾನವನ್ನು ಹೆಚ್ಚಿಸಿತು.


