ಕನ್ನಡ ನನ್ನ ಕನಸು , ಕನ್ನಡ ನನ್ನ ಮನಸ್ಸು…..
ಕನ್ನಡಿಗನೆಂಬ ಹೆಮ್ಮೆ ಸೊಗಸು….
ನಮ್ಮಲ್ಲಿ ಕನ್ನಡವನ್ನು ಉಳಿಸು…..
ಎಲ್ಲೆಲ್ಲೂ ಕನ್ನಡವನ್ನು ಬೆಳೆಸು…
ಸರ್ವರಿಗೂ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು…
ಇಂದು ನಮ್ಮ ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಶಾಲೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪವನ್ ಮಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು… ಮತ್ತೊಂದು ವಿಶೇಷವೆಂದರೆ ನಮ್ಮ ವಿದ್ಯಾರ್ಥಿಗಳಿಂದ ಬೀದಿಗಳಲ್ಲಿ ಸೈಕಲ್ ಜಾತವನ್ನು ಮಾಡಲಾಯಿತು…. ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಹಿತಿ ತಿರುಪತಿ ಹಳ್ಳಿ ಶಿವಶಂಕರಪ್ಪನವರ ಸಮ್ಮುಖದಲ್ಲಿ ಪ್ರಾರ್ಥನೆ ಹಾಗೂ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.. ಕಾರ್ಯಕ್ರಮವನ್ನು ಕುರಿತು ನಮ್ಮ ಶಾಲೆಯ ವಿದ್ಯಾರ್ಥಿಯು ಕರ್ನಾಟಕ ರಾಜ್ಯೋತ್ಸವದ ಮಹತ್ವವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳ ಕಿರುಪರಿಚಯವನ್ನು ನಮ್ಮ ಶಾಲೆಯ ಶಿಕ್ಷಕರಾದ ಪ್ರತಾಪ್ ರವರು ಮಾಡಿಕೊಟ್ಟರು… ನಂತರ ಶಾಲೆ, ಪ್ರಾಂಶುಪಾಲರು ಹಾಗೂ ಹಲವು ಶಿಕ್ಷಕರಿಂದ ಗಣ್ಯರಿಗೆ ಸನ್ಮಾನವನ್ನು ನಡೆಸಿ ನಂತರ ಅವರಿಂದ ನಮ್ಮ ವಿದ್ಯಾರ್ಥಿಗಳಿಗೆ ಕೆಲವು ಹಿತ ನುಡಿಗಳನ್ನು ಕೇಳಿದ್ದು ನಮ್ಮ ಸೌಭಾಗ್ಯವಾಗಿತ್ತು. ನಂತರ ನಮ್ಮ ವಿದ್ಯಾರ್ಥಿಗಳಿಂದ ಹಲವು ನೃತ್ಯ ಸಂಗೀತ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಅದ್ಭುತವಾಗಿ ಮೂಡಿಬಂದು ಅಲ್ಲಿ ನೆರೆದಿದ್ದ ಎಲ್ಲರ ಮುಖದಲ್ಲೂ ಮಂದಹಾಸಕ್ಕೆ ಸಾಕ್ಷಿಯಾಯಿತು …. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು..
ಜೈ ಭುವನೇಶ್ವರಿ ಜೈ ಕನ್ನಡಾಂಬೆ